Top Health Guide

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Image
  Walking ಮತ್ತು Exercise – ಶುಗರ್ ನಿಯಂತ್ರಣಕ್ಕೆ ಯಾವುದು ಉತ್ತಮ? ಇಂದಿನ ಕಾಲದಲ್ಲಿ ಮಧುಮೇಹ (Diabetes) ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಜನರು ಕೇಳುವ ಪ್ರಶ್ನೆ ಏನೆಂದರೆ: Walking ಮಾಡೋದು ಸಾಕಾ? ಅಥವಾ Exercise ಮಾಡ್ಬೇಕಾ? ಸತ್ಯ ಏನೆಂದರೆ — ಎರಡೂ ಮುಖ್ಯ. ಆದರೆ ಯಾವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಲೇಖನದಲ್ಲಿ ನೀವು ತಿಳಿಯುವಿರಿ: Walking ಮತ್ತು Exercise ನಡುವಿನ ವ್ಯತ್ಯಾಸ ಯಾವುದು ಹೆಚ್ಚು ಪರಿಣಾಮಕಾರಿ Doctors ಹಾಗೂ health guidelines ಏನು ಹೇಳುತ್ತವೆ. ಮಧುಮೇಹ ಲಕ್ಷಣಗಳು ಏನು?ಸಂಪೂರ್ಣ ಮಾರ್ಗದರ್ಶಿ What is Diabetes Symptoms Kannada  ವಿಶ್ವ ಆರೋಗ್ಯ ಸಂಸ್ಥೆಗಳು ಹಾಗೂ ಡಯಾಬಿಟಿಸ್ ಗೈಡ್‌ಲೈನ್‌ಗಳು ಹೇಳುವುದೇನಂದರೆ:     ನಿಯಮಿತ ಶಾರೀರಿಕ ಚಟುವಟಿಕೆ (Physical Activity) ರಕ್ತದ ಸಕ್ಕರೆ ನಿಯಂತ್ರಣಕ್ಕೆ ಅತ್ಯಂತ ಮುಖ್ಯವಾಗಿದೆ.  ಮಧುಮೇಹ ಮತ್ತು ಶಾರೀರಿಕ ಚಟುವಟಿಕೆ – ಸರಳವಾಗಿ ತಿಳಿದುಕೊಳ್ಳಿ. ಮಧುಮೇಹದಲ್ಲಿ ವ್ಯಾಯಾಮ ಯಾಕೆ ಮುಖ್ಯ? ಮಧುಮೇಹದಲ್ಲಿ ಏನಾಗುತ್ತೆ ಅಂದ್ರೆ, ದೇಹದಲ್ಲಿ ಗ್ಲೂಕೋಸ್ ಸರಿಯಾಗಿ ಬಳಸುವುದಿಲ್ಲ. ನೀವು ಚಲಿಸಿದಾಗ:  muscles ಗ್ಲೂಕೋಸ್ ಬಳಸುತ್ತವೆ  blood sugar ಕಡಿಮೆಯಾಗುತ್ತದೆ  insulin sensitivity ಹೆಚಗುತ್ತದೆ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ:  ...

ಬಿಸಿಲಿನಿಂದ ರಕ್ಷಣೆ

 ಬಿಸಿಲಿನ ಬೇಗೆಯಿಂದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಸರಳ ಸಲಹೆಗಳು


      ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಮಾನ ತುಂಬಾ ಹೆಚ್ಚಾಗುತ್ತದೆ. ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿಯ ಪ್ರಕಾರ ಈ ವರ್ಷ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚು ಇರಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ.

       ಬಿಸಿಲಿನ ತಾಪದಿಂದ ದೇಹದಲ್ಲಿ ದೌರ್ಬಲ್ಯ, ತಲೆಸುತ್ತು, ದಾಹ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬೇಕು.

1️⃣ ಮಧ್ಯಾಹ್ನ ಬಿಸಿಲನ್ನು ತಪ್ಪಿಸಿ

ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಿಸಿಲು ತುಂಬಾ ಹೆಚ್ಚು ಇರುತ್ತದೆ. ಸಾಧ್ಯವಾದಷ್ಟು ಈ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ.

2️⃣ ಹೆಚ್ಚು ನೀರು ಕುಡಿಯಿರಿ

ಬೇಸಿಗೆಯಲ್ಲಿ ದೇಹದ ನೀರಿನ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ದಿನಪೂರ್ತಿ ಸಾಕಷ್ಟು ನೀರು ಕುಡಿಯುವುದು ಅತ್ಯಂತ ಮುಖ್ಯ. ಬಾಯರಿಕೆ ಇಲ್ಲದ್ದರು ಪದೇ ಪದೇ ಕುಡಿಯುತ್ತಿರಿ. ಹೆಚ್ಚೆಚ್ಚು ನೀರು ಕುಡಿಯುವುದರಿಂದ ಆಯಾಸದಿಂದ  ತಪ್ಪಿಸಿಕೊಳ್ಳಬಹುದು .|

3️⃣ ಹಗುರವಾದ ಬಟ್ಟೆ ಧರಿಸಿ

ಬೇಸಿಗೆಯಲ್ಲಿ ಸಡಿಲವಾದ ಮತ್ತು ಬೆಳಗಿನ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ. ಇದರಿಂದ ದೇಹ ತಂಪಾಗಿರುತ್ತದೆ. ಗಾಢ ಬಣ್ಣದ ಉಡುಗೆ ಬಳಸಬೇಡಿ.

4️⃣ ತಂಪಾದ ನೈಸರ್ಗಿಕ ಪಾನೀಯಗಳನ್ನು ಸೇವಿಸಿ:

ದೇಹವನ್ನು ತಂಪಾಗಿಡಲು

-ಮಜ್ಜಿಗೆ

-ಲಿಂಬು ನೀರು

-ತೆಂಗಿನಕಾಯಿ ನೀರು

-ORS

-ಹಣ್ಣಿನ ರಸ  

ಇಂತಹ ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. 

5️⃣ ಮದ್ಯಪಾನ ಮತ್ತು ಹೆಚ್ಚು ಕಾಫಿಯನ್ನು ತಪ್ಪಿಸಿ

ಬೇಸಿಗೆಯಲ್ಲಿ ಮದ್ಯಪಾನ ಮತ್ತು ಹೆಚ್ಚು ಕಾಫಿ ಸೇವಿಸುವುದು ದೇಹದ ನೀರಿನ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಇವುಗಳನ್ನು ಕಡಿಮೆ ಮಾಡುವುದು ಉತ್ತಮ.

6️⃣ ಮನೆ ಒಳಗೆ ತಂಪಾಗಿರಿ

ಬೇಸಿಗೆಯಲ್ಲಿ ಮನೆ ಒಳಗೆ ತಂಪಾಗಿರಲು

ಕಿಟಕಿಗಳನ್ನು ತೆರೆಯಿರಿ

ಗಾಳಿ ಸರಿಯಾಗಿ ಹರಿಯುವಂತೆ ನೋಡಿಕೊಳ್ಳಿ.

7️⃣ ಮಕ್ಕಳ ಮತ್ತು ಹಿರಿಯರ ಬಗ್ಗೆ ಹೆಚ್ಚು ಗಮನ ಕೊಡಿ

ಮಕ್ಕಳು, ಹಿರಿಯರು ಮತ್ತು ಗರ್ಭಿಣಿಯರು ಬಿಸಿಲಿಗೆ ಹೆಚ್ಚು ತೊಂದರೆ ಅನುಭವಿಸಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು.

8️⃣ ವಾಹನಗಳಲ್ಲಿ ಯಾರನ್ನೂ ಬಿಡಬೇಡಿ

ಮಕ್ಕಳು ಅಥವಾ ಪಶುಗಳನ್ನು ಮುಚ್ಚಿದ ವಾಹನದಲ್ಲಿ ಬಿಡುವುದು ತುಂಬಾ ಅಪಾಯಕರ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

9️⃣ ಅನಾರೋಗ್ಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ:

-ತಲೆಸುತ್ತು

-ಹೆಚ್ಚು ದೌರ್ಬಲ್ಯ

-ಜ್ವರ

-ವಾಂತಿ

ತ್ವಚೆಯನ್ನು ಸುರಕ್ಷಿತವಾಗಿ ಕಾಯುವ ವಿಧಾನಗಳು

ತವಚೆಯನ್ನು ಆರೋಗ್ಯವಂತವಾಗಿ, ಸುಂದರವಾಗಿ ಕಾಪಾಡಲು ಕೆಲವು ಸರಳ ವೈಯಕ್ತಿಕ ರಕ್ಷಣಾ ಕ್ರಮಗಳನ್ನು ಪಾಲಿಸಬಹುದು. ಮನೆ ಹೊರಗೆ ಹೋಗುವ ಮೊದಲು ಈ ಕ್ರಮಗಳನ್ನು ಅನುಸರಿಸುವುದರಿಂದ ಸೂರ್ಯನ ಕಿರಣಗಳಿಂದ ತ್ವಚೆಯನ್ನು ಪರಿಣಾಮಕಾರಿಯಾಗಿ ರಕ್ಷಿಸಬಹುದು.

1. ಸನ್ ಸ್ಕ್ರೀನ್ ಬಳಕೆ (Sunscreen Use)

-ಮನೆಯಿಂದ ಹೊರಗಡೆ ಹೋಗುವ 20–30 ನಿಮಿಷಗಳ ಮೊದಲು ಕನಿಷ್ಠ SPF 30 ಅಥವಾ ಅದಕ್ಕಿಂತ ಹೆಚ್ಚಿನ ಸನ್ ಸ್ಕ್ರೀನ್ ಲೋಶನ್ ಅನ್ನು ಹಚ್ಚಿಕೊಳ್ಳಿ.

-ಇದು ತ್ವಚೆಯನ್ನು ನೇರ ಸೂರ್ಯಕಿರಣ (UV Rays)ಗಳಿಂದ ರಕ್ಷಿಸುತ್ತದೆ.

-ಹಗಲು ಸಮಯದಲ್ಲಿ ಸನ್ ಸ್ಕ್ರೀನ್ ಪುನಃ ಹಚ್ಚುವುದು ಉತ್ತಮ ಅಭ್ಯಾಸ.

2. ಬಟ್ಟೆಯ ಆಯ್ಕೆ (Clothing Selection)

-ಬೆಳಗಿನ ಬೆಳಕು ಅಥವಾ ಬಿಸಿಲು ಬರುವ ಸಮಯದಲ್ಲಿ ತಿಳಿ ಬಣ್ಣದ, ನದೀಲವಾದ ಹತ್ತಿ (Cotton) ಬಟ್ಟೆಗಳನ್ನು ಧರಿಸಿ.

-ಬಟ್ಟೆ ನಿಮ್ಮ ಚರ್ಮವನ್ನು ಬಿಸಿಲಿನಿಂದ ನೆರವಾಗಿ, ಉರಿಯುವುದನ್ನು ತಡೆಯುತ್ತದೆ.

-ತುಂಬಾ ಹತ್ತಿ ಅಥವಾ ಹಗುರವಾದ ಬಟ್ಟೆ ಹೆಚ್ಚು ಆರಾಮದಾಯಕವಾಗುತ್ತದೆ.

3. ಭತ್ರಿ ಮತ್ತು ಟೋಪಿ (Umbrella & Hat)

-ಹೊರಗೆ ಹೋಗುವಾಗ ಯಾವಾಗಲೂ ಭತ್ರಿ (Umbrella) ಅಥವಾ ಅಗಲವಾದ ಅಂಚುಳ್ಳ ಟೋಪಿ (Hat) ಬಳಸಿರಿ.

-ಇದು ತ್ವಚೆಯನ್ನು ನೇರ ಸೂರ್ಯಕಿರಣದಿಂದ ರಕ್ಷಿಸಲು ಹೆಚ್ಚುವರಿ ಸಹಾಯ ಮಾಡುತ್ತದೆ.

💡 ಸಾರಾಂಶ:

ಸನ್ ಸ್ಕ್ರೀನ್, ಸರಿಯಾದ ಬಟ್ಟೆ ಮತ್ತು ಟೋಪಿ/ಭತ್ರಿ ಎಂಬ ಮೂರು ಸರಳ ಕ್ರಮಗಳು ನಿಮ್ಮ ಚರ್ಮವನ್ನು ನೇರ ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಸಾಕಷ್ಟಿವೆ. ಪ್ರತಿದಿನವೂ ಈ ಕ್ರಮಗಳನ್ನು ಪಾಲಿಸುವುದರಿಂದ ತ್ವಚೆಯ ಆರೋಗ್ಯ ಮತ್ತು ವೈಭವವನ್ನು ಕಾಪಾಡಬಹುದು.

ಸಮಾರೋಪ:

ಬೇಸಿಗೆಯ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಸಾಕಷ್ಟು ನೀರು ಕುಡಿಯುವುದು, ಬಿಸಿಲನ್ನು ತಪ್ಪಿಸುವುದು ಮತ್ತು ಆರೋಗ್ಯಕರ ಆಹಾರ ಸೇವಿಸುವುದರಿಂದ ಬೇಸಿಗೆಯ ತಾಪದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

– ನಮ್ಮ ಆರೋಗ್ಯ ಜೀವನ

Comments

Popular posts from this blog

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Hair Fall Control Kannada: ಒದ್ದೆಯಾದ ಕೂದಲಿನಲ್ಲಿ ಮಾಡುವ 5 ತಪ್ಪುಗಳು & ಸರಿಯಾದ ಪರಿಹಾರಗಳು

ಹೈ BP ಲಕ್ಷಣಗಳು ಯಾವುವು? ಹೈಪರ್‌ಟೆನ್ಷನ್ ಸಂಪೂರ್ಣ ಮಾಹಿತಿ ಕನ್ನಡದಲ್ಲಿ