Top Health Guide

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Image
  Walking ಮತ್ತು Exercise – ಶುಗರ್ ನಿಯಂತ್ರಣಕ್ಕೆ ಯಾವುದು ಉತ್ತಮ? ಇಂದಿನ ಕಾಲದಲ್ಲಿ ಮಧುಮೇಹ (Diabetes) ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಜನರು ಕೇಳುವ ಪ್ರಶ್ನೆ ಏನೆಂದರೆ: Walking ಮಾಡೋದು ಸಾಕಾ? ಅಥವಾ Exercise ಮಾಡ್ಬೇಕಾ? ಸತ್ಯ ಏನೆಂದರೆ — ಎರಡೂ ಮುಖ್ಯ. ಆದರೆ ಯಾವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಲೇಖನದಲ್ಲಿ ನೀವು ತಿಳಿಯುವಿರಿ: Walking ಮತ್ತು Exercise ನಡುವಿನ ವ್ಯತ್ಯಾಸ ಯಾವುದು ಹೆಚ್ಚು ಪರಿಣಾಮಕಾರಿ Doctors ಹಾಗೂ health guidelines ಏನು ಹೇಳುತ್ತವೆ. ಮಧುಮೇಹ ಲಕ್ಷಣಗಳು ಏನು?ಸಂಪೂರ್ಣ ಮಾರ್ಗದರ್ಶಿ What is Diabetes Symptoms Kannada  ವಿಶ್ವ ಆರೋಗ್ಯ ಸಂಸ್ಥೆಗಳು ಹಾಗೂ ಡಯಾಬಿಟಿಸ್ ಗೈಡ್‌ಲೈನ್‌ಗಳು ಹೇಳುವುದೇನಂದರೆ:     ನಿಯಮಿತ ಶಾರೀರಿಕ ಚಟುವಟಿಕೆ (Physical Activity) ರಕ್ತದ ಸಕ್ಕರೆ ನಿಯಂತ್ರಣಕ್ಕೆ ಅತ್ಯಂತ ಮುಖ್ಯವಾಗಿದೆ.  ಮಧುಮೇಹ ಮತ್ತು ಶಾರೀರಿಕ ಚಟುವಟಿಕೆ – ಸರಳವಾಗಿ ತಿಳಿದುಕೊಳ್ಳಿ. ಮಧುಮೇಹದಲ್ಲಿ ವ್ಯಾಯಾಮ ಯಾಕೆ ಮುಖ್ಯ? ಮಧುಮೇಹದಲ್ಲಿ ಏನಾಗುತ್ತೆ ಅಂದ್ರೆ, ದೇಹದಲ್ಲಿ ಗ್ಲೂಕೋಸ್ ಸರಿಯಾಗಿ ಬಳಸುವುದಿಲ್ಲ. ನೀವು ಚಲಿಸಿದಾಗ:  muscles ಗ್ಲೂಕೋಸ್ ಬಳಸುತ್ತವೆ  blood sugar ಕಡಿಮೆಯಾಗುತ್ತದೆ  insulin sensitivity ಹೆಚಗುತ್ತದೆ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ:  ...

Diabetic Foot Care in Kannada: ಮಧುಮೇಹಿಗಳ ಕಾಲಿನ ರಕ್ಷಣೆ ಹೇಗೆ?

Kannada diabetic foot care awareness image showing diabetic patient checking foot injury
ಮಧುಮೇಹಿಗಳ ಕಾಲಿನ ಆರೈಕೆ ಕುರಿತು ಆರೋಗ್ಯ ಜಾಗೃತಿ ಚಿತ್ರ

       ಇವತ್ತಿನ ದಿನಗಳಲ್ಲಿ ಮಧುಮೇಹ (Diabetes) ಅಂದ್ರೆ ಸಾಮಾನ್ಯ ಕಾಯಿಲೆ ಆಗಿಬಿಟ್ಟಿದೆ. ಆದರೆ “ಸಕ್ಕರೆ ಖಾಯಿಲೆ ಇದೆ” ಅಂದ್ರೆ ಮಾತ್ರ ಮಾತ್ರೆ ತೆಗೆದುಕೊಂಡರೆ ಸಾಕಾಗಲ್ಲ. ದೇಹದ ಪ್ರತಿಯೊಂದು ಭಾಗಕ್ಕೂ ಇದರ ಪರಿಣಾಮ ಬೀ ರತ್ತದೆ. ಅದರಲ್ಲಿ ತುಂಬಾ ಹೆಚ್ಚು ಗಮನ ಕೊಡಬೇಕಾದದ್ದು — ಕಾಲಿನ ಆರೈಕೆ (Diabetic Foot Care).

      ಹಲವರು “ಕಾಲಲ್ಲಿ ಚಿಕ್ಕ ಗಾಯ ಇದೆ”, “ಸ್ವಲ್ಪ ಬಿರುಕು ಬಂದಿದೆ”, “ಚಪ್ಪಲಿ ಕಚ್ಚಿದೆ” ಅಂತಾ ಲೈಟ್ ಆಗಿ ತೆಗೆದುಕೊಳ್ಳುತ್ತಾರೆ. ಆದರೆ ಮಧುಮೇಹ ಇರುವವರಲ್ಲಿ ಇದೇ ಸಣ್ಣ ಸಮಸ್ಯೆ ಮುಂದೆ ದೊಡ್ಡ ಗಾಯ, ಸೋಂಕು, ಕೆಲವೊಮ್ಮೆ ಕಾಲು ಕತ್ತರಿಸುವ ಪರಿಸ್ಥಿತಿ ತನಕ ಹೋಗಬಹುದು.


    ಆದ್ದರಿಂದ ಮಧುಮೇಹ ಇರುವ ಪ್ರತಿಯೊಬ್ಬರೂ ಕಾಲಿನ ಆರೈಕೆಯನ್ನು ದಿನನಿತ್ಯದ ಅಭ್ಯಾಸ ಮಾಡಿಕೊಳ್ಳಬೇಕು.


       ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಂತರಾಷ್ಟ್ರೀಯ ಮಧುಮೇಹ ಫೆಡರೇಶನ್ ಪ್ರಕಾರ, ಸರಿಯಾದ ಕಾಲಿನ ಆರೈಕೆ ಮಾಡಿದರೆ ಬಹುತೇಕ ಕಾಲು ಕತ್ತರಿಸುವ ಪರಿಸ್ಥಿತಿಯನ್ನು ತಪ್ಪಿಸಬಹುದು ಎಂದು ಹೇಳಲಾಗಿದೆ. 


ಮಧುಮೇಹದ ಆರಂಭಿಕ ಲಕ್ಷಣಗಳ ಬಗ್ಗೆ ಇಲ್ಲಿ ಓದಿ”

ಮಧುಮೇಹದಿಂದ ಕಾಲಿಗೆ ಏನು ಸಮಸ್ಯೆ ಆಗುತ್ತದೆ?

          ಮಧುಮೇಹ ಜಾಸ್ತಿ ದಿನ ನಿಯಂತ್ರಣದಲ್ಲಿಲ್ಲ ಅಂದ್ರೆ ದೇಹದ ನರಗಳು ಮತ್ತು ರಕ್ತನಾಳಗಳಿಗೆ ಹಾನಿ ಆಗುತ್ತದೆ. ಇದರ ಪರಿಣಾಮ ಹೆಚ್ಚು ಕಾಣಿಸಿಕೊಳ್ಳುವ ಭಾಗಗಳಲ್ಲಿ ಕಾಲು ಕೂಡ ಒಂದು. ಅದರಿಂದ ಮಧುಮೇಹಿಗಳಲ್ಲಿ ಕಾಲಿನ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸುತ್ತವೆ.


ಮುಖ್ಯವಾಗಿ ಎರಡು ಸಮಸ್ಯೆಗಳು ಬರುತ್ತವೆ:

1. ನರ ಹಾನಿ (Neuropathy)

Diabetic neuropathy symptoms in feet illustration
ಮಧುಮೇಹದಿಂದ ನರ ಹಾನಿಯಾಗುವ ಪರಿಸ್ಥಿತಿ


            ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚು ದಿನ ನಿಯಂತ್ರಣದಲ್ಲಿ ಇರದಿದ್ದರೆ ದೇಹದ ನರಗಳಿಗೆ ಹಾನಿಯಾಗುತ್ತದೆ. ಇದನ್ನೇ Diabetic Neuropathy ಅಥವಾ ನರ ಹಾನಿ ಅಂತ ಕರೀತಾರೆ.


             ಇದು ಹೆಚ್ಚು ಕಾಲು ಮತ್ತು ಪಾದಗಳಲ್ಲಿ ಕಾಣಿಸಿಕೊಳ್ಳುತ್ತದೆ.


            ಸರಳವಾಗಿ ಹೇಳಬೇಕಂದ್ರೆ, ಕಾಲಿನ “feeling” ನಿಧಾನವಾಗಿ ಕಡಿಮೆಯಾಗೋದು.


ಯಾಕೆ ಆಗುತ್ತದೆ?

Blood Sugar ಜಾಸ್ತಿ ಇದ್ದರೆ ನರಗಳಿಗೆ ಸರಿಯಾಗಿ ರಕ್ತ ಮತ್ತು ಆಮ್ಲಜನಕ ಸಿಗೋದಿಲ್ಲ.

ಅದರಿಂದ:

  • ನರಗಳು ದುರ್ಬಲವಾಗುತ್ತವೆ.
  • ಸಂದೇಶ ಕಳುಹಿಸುವ ಶಕ್ತಿ ಕಡಿಮೆಯಾಗುತ್ತದೆ.
  • ಕಾಲಿನ ಸಂವೇದನೆ ಹಾಳಾಗುತ್ತದೆ.

2. ರಕ್ತಪ್ರಸರಣ ಕಡಿಮೆಯಾಗುವುದು

Poor blood circulation in diabetic foot illustration
ಮಧುಮೇಹದಿಂದ ಕಾಲಿಗೆ ರಕ್ತಪ್ರಸರಣ ಕಡಿಮೆಯಾಗುವುದು


     ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಹೆಚ್ಚು ದಿನ ಜಾಸ್ತಿಯಾಗಿದ್ದರೆ ರಕ್ತನಾಳಗಳು ನಿಧಾನವಾಗಿ ಹಾನಿಯಾಗುತ್ತವೆ. ಇದರಿಂದ ಕಾಲಿಗೆ ಸರಿಯಾಗಿ ರಕ್ತ ಹರಿಯೋದಿಲ್ಲ. ಇದನ್ನೇ ರಕ್ತಪ್ರಸರಣ ಕಡಿಮೆಯಾಗುವುದು ಅಂತ ಕರೀತಾರೆ.


    ಇದು ಮಧುಮೇಹಿಗಳಲ್ಲಿ ಕಾಣಿಸುವ ಗಂಭೀರ ಸಮಸ್ಯೆಗಳಲ್ಲಿ ಒಂದು.

ಯಾಕೆ ಆಗುತ್ತದೆ?

Blood Sugar ಹೆಚ್ಚಾಗಿ ಇದ್ದರೆ:

  • ರಕ್ತನಾಳಗಳು ಗಟ್ಟಿಯಾಗುತ್ತವೆ
  • ಸಣ್ಣ ರಕ್ತನಾಳಗಳು ಕಿರಿದಾಗುತ್ತವೆ
  • ಕಾಲಿಗೆ ಆಮ್ಲಜನಕ ಮತ್ತು ಪೋಷಕಾಂಶ ಕಡಿಮೆ ತಲುಪುತ್ತದೆ

ಅದರಿಂದ ಗಾಯ ಗುಣವಾಗೋದು ನಿಧಾನವಾಗುತ್ತದೆ.


ಇದರಿಂದ ಏನು ಅಪಾಯ?

ರಕ್ತಪ್ರಸರಣ ಕಡಿಮೆಯಾದರೆ:

  • ಗಾಯಕ್ಕೆ ಸರಿಯಾಗಿ ರಕ್ತ ಸಿಗೋದಿಲ್ಲ
  • ಸೋಂಕು ಬೇಗ ಬರುತ್ತದೆ
  • ಚಿಕ್ಕ ಗಾಯವೂ ದೊಡ್ಡ ಹುಣ್ಣಾಗಬಹುದು

ತೀವ್ರ ಪರಿಸ್ಥಿತಿಯಲ್ಲಿ:

  • ಕಾಲಿನ tissue ಸತ್ತುಹೋಗಬಹುದು
  • Gangrene ಆಗಬಹುದು
  • ಕೆಲವೊಮ್ಮೆ ಕಾಲು ಕತ್ತರಿಸುವ ಪರಿಸ್ಥಿತಿಯೂ ಬರಬಹುದು
Blood Sugar control ಮಾಡುವ ಸರಳ ವಿಧಾನಗಳು”

ಇತರೆ ಸಮಸ್ಯೆಗಳು  

3. ಕಾಲಿನ ಗಾಯ ಮತ್ತು ಹುಣ್ಣು (Foot Ulcer)

ಸಣ್ಣ ಕಟ್ ಅಥವಾ ಬಿರುಕು ಕೂಡ ದೊಡ್ಡ ಗಾಯವಾಗಬಹುದು.

ಕಾರಣ:

  • ಸ್ಪರ್ಶ ಕಡಿಮೆ
  • ರಕ್ತಪ್ರಸರಣ ಕಡಿಮೆ
  • ಸೋಂಕು ಬೇಗ ಹಿಡಿಯುವುದು
ಸಮಯಕ್ಕೆ ಚಿಕಿತ್ಸೆ ಮಾಡಿಸದಿದ್ದರೆ ಗಂಭೀರವಾಗಬಹುದು.

4. ಸೋಂಕು (Infection)

ಮಧುಮೇಹಿಗಳಲ್ಲಿ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಆಗಿರಬಹುದು.

ಹೀಗಾಗಿ:

  • ಗಾಯದಲ್ಲಿ ಪಸ್
  • ದುರ್ವಾಸನೆ
  • ಕೆಂಪಾಗುವುದು
  • ಊತ
ಇತ್ಯಾದಿ ಲಕ್ಷಣಗಳು ಕಾಣಬಹುದು.

5. ಕಾಲು ಕಪ್ಪಾಗುವುದು (Gangrene)

ತುಂಬಾ ಗಂಭೀರ ಪರಿಸ್ಥಿತಿಯಲ್ಲಿ ಕಾಲಿಗೆ ರಕ್ತ ಸರಿಯಾಗಿ ಹೋಗದೇ tissue ಸತ್ತುಹೋಗಬಹುದು.

ಕೆಲವೊಮ್ಮೆ ಕಾಲು ಕತ್ತರಿಸುವ ಪರಿಸ್ಥಿತಿಯೂ ಬರಬಹುದು.

6. Heel Crack ಮತ್ತು ಒಣ ಚರ್ಮ

ಮಧುಮೇಹ ಇರುವವರಲ್ಲಿ ಚರ್ಮ ಒಣಗುತ್ತದೆ.
ಅದರಿಂದ:
  • ಹಿಮ್ಮಡಿಯಲ್ಲಿ ಬಿರುಕು
  • ಚರ್ಮ ಒಡೆಯುವುದು
  • ನೋವು
ಬರಬಹುದು.

“Diabetic Foot” ಅಂದ್ರೆ ಏನು?

ಮಧುಮೇಹದಿಂದ ಕಾಲಿನಲ್ಲಿ ಉಂಟಾಗುವ ಸಮಸ್ಯೆಗಳನ್ನೆಲ್ಲ ಒಟ್ಟಾಗಿ “Diabetic Foot” ಅಂತ ಕರೀತಾರೆ.


ಇದಲ್ಲೇನು ಬರುತ್ತೆ ಅಂದ್ರೆ:

  • ಕಾಲಿನ ಗಾಯ
  • ಪಾದದ ಹುಣ್ಣು
  • ಸೋಂಕು
  • ಕಾಲಿನ ಬೆರಳ ಕಪ್ಪಾಗುವುದು
  • ಚರ್ಮ ಒಡೆದು ಬಿರುಕು ಬರುವುದು
  • ಕಾಲಿನಲ್ಲಿ ಸಂವೇದನೆ ಕಡಿಮೆಯಾಗುವುದು

ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಕೆಲವರಿಗೆ ಕಾಲು ಕತ್ತರಿಸುವ ಪರಿಸ್ಥಿತಿಯೂ ಬರಬಹುದು.


ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣಗಳು

ಈ ಲಕ್ಷಣಗಳನ್ನು ಯಾವತ್ತೂ ನಿರ್ಲಕ್ಷ್ಯ ಮಾಡಬೇಡಿ:


  • ಕಾಲಿನಲ್ಲಿ ಚುಚ್ಚುವಂತೆ ಅನಿಸುವುದು
  • ಸುಡುವ ಅನುಭವ
  • ಕಾಲು ಜಿಡ್ಡಾಗುವುದು
  • ಸ್ಪರ್ಶ ಗೊತ್ತಾಗದಿರುವುದು
  • ಕಾಲು ಊದಿಕೊಳ್ಳುವುದು
  • ಚರ್ಮ ಬಣ್ಣ ಬದಲಾಗುವುದು
  • ಕಾಲಿನ ಗಾಯ ಗುಣವಾಗದಿರುವುದು
  • ದುರ್ವಾಸನೆ ಬರುವುದು
  • ಕಾಲು ಯಾವಾಗಲೂ ತಣ್ಣಗೆ ಅನ್ನಿಸುವುದು
  • ವಿದ್ಯುತ್ ಶಾಕ್ ಹೊಡೆದಂತೆ feeling

ಈ ಲಕ್ಷಣಗಳು ಕಂಡರೆವಿದ್ಯುತ್ ಶಾಕ್ ಹೊಡೆದಂತೆ feeling ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. 


ದಿನನಿತ್ಯ ಮಧುಮೇಹಿಗಳ ಕಾಲಿನ ಆರೈಕೆ ಹೇಗಿರಬೇಕು?

1. ಪ್ರತಿದಿನ ಕಾಲು ಚೆಕ್ ಮಾಡಿಕೊಳ್ಳಿ

Diabetic patient checking feet daily
ಪ್ರತಿದಿನ ಕಾಲು ಪರಿಶೀಲನೆ ಮಾಡುವುದು ತುಂಬಾ ಮುಖ್ಯ


ಇದು ಅತ್ಯಂತ ಮುಖ್ಯ.

ಪ್ರತಿ ದಿನ:

  • ಬೆರಳ ನಡುವೆ
  • ಪಾದದ ಕೆಳಭಾಗ
  • ಹಿಮ್ಮಡಿ ಭಾಗ
  • ನೇಗಿಲಿನ ಸುತ್ತ

ಎಲ್ಲ ಚೆನ್ನಾಗಿ ನೋಡಿ.

ಗಾಯ, ಬಿರುಕು, ಕೆಂಪಾಗಿರುವುದು, ನೀರು ತುಂಬಿರುವುದು ಇದ್ಯಾ ಅಂತ ನೋಡಬೇಕು.


ಕಣ್ಣು ಚೆನ್ನಾಗಿ ಕಾಣಿಸದಿದ್ದರೆ ಮನೆಯವರ ಸಹಾಯ ತೆಗೆದುಕೊಳ್ಳಿ.

ಮಧುಮೇಹಿಗಳಿಗೆ ಸರಿಯಾದ ಆಹಾರ ಪಟ್ಟಿ”

2. ಕಾಲು ಸ್ವಚ್ಛವಾಗಿಟ್ಟುಕೊಳ್ಳಿ

ಪ್ರತಿದಿನ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆಯಿರಿ.

ಗಮನಿಸಿ:

  • ತುಂಬಾ ಬಿಸಿ ನೀರು ಬೇಡ
  • ಮೃದುವಾದ ಸಾಬೂನು ಬಳಸಿ
  • ತೊಳೆದ ಮೇಲೆ ಚೆನ್ನಾಗಿ ಒರೆಸಿ
  • ಮುಖ್ಯವಾಗಿ ಬೆರಳ ನಡುವೆ ಒದ್ದೆ ಉಳಿಯಬಾರದು.
  • ಒದ್ದೆಯಿಂದ ಫಂಗಲ್ ಇನ್ಫೆಕ್ಷನ್ ಆಗಬಹುದು. 


3. ಕಾಲಿಗೆ ಕ್ರೀಮ್ ಹಚ್ಚಿ

ಮಧುಮೇಹಿಗಳ ಕಾಲು ಒಣಗುತ್ತದೆ.

ಹೀಗಾಗಿ:

  • ಹಿಮ್ಮಡಿಯಲ್ಲಿ ಬಿರುಕು ಬರುತ್ತದೆ
  • ಚರ್ಮ ಒಡೆಯಬಹುದು

ಆದ್ದರಿಂದ moisturizer ಅಥವಾ ತೆಂಗಿನ ಎಣ್ಣೆ ಸ್ವಲ್ಪ ಹಚ್ಚಬಹುದು.

ಆದ್ರೆ ಬೆರಳ ನಡುವೆ ಹಚ್ಚಬೇಡಿ.


4. ಬರಿಗಾಲಿನಲ್ಲಿ ನಡೆಯಬೇಡಿ

ಮನೆಯಲ್ಲಿ ಕೂಡ ಬರಿಗಾಲಿನಲ್ಲಿ ನಡೆಯೋದು ತಪ್ಪು.

ಏಕೆ ಅಂದ್ರೆ:

  • ಸಣ್ಣ ಕಲ್ಲು
  • ಸೂಜಿ
  • ಮುಳ್ಳು
  • ಬಿಸಿ ನೆಲ

ಇವುಗಳಿಂದ ಗಾಯ ಆಗಬಹುದು.

ಸಂವೇದನೆ ಕಡಿಮೆ ಇದ್ದರೆ ಗಾಯವಾದರೂ ಗೊತ್ತಾಗುವುದಿಲ್ಲ.


5. ಸರಿಯಾದ ಚಪ್ಪಲಿ ಧರಿಸಿ

Proper diabetic footwear awareness image
ಮಧುಮೇಹಿಗಳಿಗೆ ಸರಿಯಾದ ಚಪ್ಪಲಿ ಬಳಕೆ ಅಗತ್ಯ


ತುಂಬಾ ಟೈಟ್ ಚಪ್ಪಲಿ ಬೇಡ.

ಚಪ್ಪಲಿ:

  • ಮೃದುವಾಗಿರಬೇಕು
  • ಕಾಲಿಗೆ ಸರಿಯಾಗಿ ಫಿಟ್ ಆಗಿರಬೇಕು
  • ಒಳಗೆ ಕಲ್ಲು ಅಥವಾ ತಿರುವು ಇರಬಾರದು
  • ಹೊಸ ಚಪ್ಪಲಿ ಹಾಕಿದಾಗ ಮೊದಲಿಗೆ ಸ್ವಲ್ಪ ಸಮಯ ಮಾತ್ರ ಹಾಕಿ.


6. ಕಾಟನ್ ಸಾಕ್ಸ್ ಬಳಸಿ

ಸಾಕ್ಸ್:

  • ಬೆವರು ಹೀರಿಕೊಳ್ಳಬೇಕು
  • ತುಂಬಾ ಬಿಗಿಯಾಗಿರಬಾರದು
  • ಪ್ರತಿದಿನ ಬದಲಾಯಿಸಿ.
  • ಒದ್ದೆಯಾದ ಸಾಕ್ಸ್ ಮತ್ತೆ ಹಾಕಬೇಡಿ.


7. Nails ಕತ್ತರಿಸುವಾಗ ಜಾಗ್ರತೆ

  • ತುಂಬಾ ಆಳವಾಗಿ ಕತ್ತರಿಸಬೇಡಿ
  • ಮೂಲೆಗಳನ್ನು ಹೆಚ್ಚು ಕತ್ತರಿಸಬೇಡಿ
  • ಹೀಗೆ ಮಾಡಿದರೆ ಗಾಯ ಆಗಬಹುದು.

ಕಣ್ಣು ಕಾಣಿಸದಿದ್ದರೆ ಅಥವಾ ಕೈ ನಡುಗುತ್ತಿದ್ದರೆ ಮನೆಯವರ ಸಹಾಯ ಪಡೆಯಿರಿ.


8. ಸಕ್ಕರೆ ನಿಯಂತ್ರಣದಲ್ಲಿ ಇರಲಿ

ಇದೇ ಮುಖ್ಯವಾದ ಔಷಧಿ!

Blood Sugar ನಿಯಂತ್ರಣದಲ್ಲಿ ಇದ್ದರೆ:

  • ನರ ಹಾನಿ ಕಡಿಮೆ
  • ಗಾಯ ಬೇಗ ಗುಣವಾಗುತ್ತದೆ
  • ಸೋಂಕು ಕಡಿಮೆ

HbA1c ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.


ಯಾವ ಸಮಯದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು?

ಈ ಲಕ್ಷಣಗಳಿದ್ದರೆ ತಡ ಮಾಡಬೇಡಿ:

  • ಗಾಯ ಗುಣವಾಗದೇ ಇರುವುದು
  • ಕಾಲು ಕೆಂಪಾಗುವುದು
  • ಪಸ್ ಬರುವುದು
  • ದುರ್ವಾಸನೆ
  • ಕಾಲು ಕಪ್ಪಾಗುವುದು
  • ಜ್ವರದ ಜೊತೆ ಕಾಲಿನ ಗಾಯ
  • ತುಂಬಾ ಊತ

ಇವು ಗಂಭೀರ ಸೋಂಕಿನ ಲಕ್ಷಣಗಳಾಗಿರಬಹುದು. 


ಮಧುಮೇಹಿಗಳ ಕಾಲಿನಲ್ಲಿ ಸಾಮಾನ್ಯವಾಗಿ ಕಾಣುವ ಸಮಸ್ಯೆಗಳು

Diabetic foot ulcer warning signs image
ಕಾಲಿನ ಗಾಯವನ್ನು ನಿರ್ಲಕ್ಷ್ಯ ಮಾಡಬೇಡಿ


1. Corns ಮತ್ತು Callus

ಕಾಲಿನ ಮೇಲೆ ಗಟ್ಟಿಯಾದ ಚರ್ಮ ಬರುತ್ತದೆ.

ಬ್ಲೇಡ್ ಬಳಸಿ ಕತ್ತರಿಸಬೇಡಿ.


2. Heel Crack

  • ಹಿಮ್ಮಡಿಯಲ್ಲಿ ಬಿರುಕು.
  • ಒಣ ಚರ್ಮದಿಂದ ಆಗುತ್ತದೆ.
  • ಸಮಯಕ್ಕೆ ಚಿಕಿತ್ಸೆ ಇಲ್ಲದಿದ್ದರೆ ಸೋಂಕಾಗಬಹುದು.


3. Fungal Infection

  • ಬೆರಳ ನಡುವೆ ಬಿಳಿ ಬಣ್ಣ, ಕೆರಕು, ದುರ್ವಾಸನೆ.
  • ಒದ್ದೆ ಕಾಲಿನಿಂದ ಹೆಚ್ಚು ಬರುತ್ತದೆ.


4. Foot Ulcer

  • ಗಂಭೀರ ಸಮಸ್ಯೆ.
  • ಗಾಯ ಆಳವಾಗಿ ಹೋಗಿ ಹುಣ್ಣಾಗುತ್ತದೆ.
  • ಇದನ್ನು ನಿರ್ಲಕ್ಷ್ಯ ಮಾಡಬಾರದು.


ಮನೆಯಲ್ಲೇ ಮಾಡಬಹುದಾದ ಸರಳ ಆರೈಕೆ

Diabetic patient checking feet daily
ಪ್ರತಿದಿನ ಕಾಲು ಪರಿಶೀಲನೆ ಮಾಡುವುದು ತುಂಬಾ ಮುಖ್ಯ


  • ದಿನಕ್ಕೆ ಒಮ್ಮೆ ಕಾಲು ಪರಿಶೀಲನೆ
  • ಸ್ವಚ್ಛತೆ
  • ಸರಿಯಾದ footwear
  • Blood sugar control
  • Smoking ತಪ್ಪಿಸುವುದು
  • ನಡೆಯುವ ವ್ಯಾಯಾಮ


ಗ್ರಾಮೀಣ ಪ್ರದೇಶದವರು ವಿಶೇಷವಾಗಿ ಗಮನಿಸಬೇಕಾದದ್ದು

ಹಳ್ಳಿಗಳಲ್ಲಿ ಹಲವರು:

  • ಬರಿಗಾಲಿನಲ್ಲಿ ನಡೆಯುತ್ತಾರೆ
  • ಚಿಕ್ಕ ಗಾಯವನ್ನು ನಿರ್ಲಕ್ಷ್ಯ ಮಾಡುತ್ತಾರೆ
  • ಮನೆಮದ್ದು ಮಾತ್ರ ಬಳಸುತ್ತಾರೆ

ಇದು ತುಂಬಾ ಅಪಾಯಕಾರಿ.


ಮಧುಮೇಹಿಗಳಲ್ಲಿ ಸಣ್ಣ ಗಾಯವೂ ದೊಡ್ಡ ಸಮಸ್ಯೆಯಾಗಬಹುದು.

ಮನೆಮದ್ದು ಬಳಸದಿರಿ

ಕೆಲವರು:

  • ಅರಿಶಿನ
  • ಚೂನಾ
  • ಬೆಂಕಿ ತಾಪ
  • ಎಣ್ಣೆ
  • ಹರ್ಬಲ್ ಪುಡಿ

ಹಾಕುತ್ತಾರೆ.

ಆದರೆ ವೈದ್ಯರ ಸಲಹೆ ಇಲ್ಲದೆ ಇವು ಬಳಸಿದರೆ ಸೋಂಕು ಹೆಚ್ಚಾಗಬಹುದು.


ಹಿರಿಯ ನಾಗರಿಕರಲ್ಲಿ ಹೆಚ್ಚು ಜಾಗ್ರತೆ ಬೇಕು

ವಯಸ್ಸಾದ ಮಧುಮೇಹಿಗಳಲ್ಲಿ:

  • ಕಣ್ಣು ಕಾಣೋದು ಕಡಿಮೆ
  • ಕಾಲಿನ ಸ್ಪರ್ಶ ಕಡಿಮೆ
  • ರಕ್ತಪ್ರಸರಣ ಕಡಿಮೆ

ಹೀಗಾಗಿ ಮನೆಯವರು ಸಹ ಕಾಲು ಪರಿಶೀಲನೆ ಮಾಡಬೇಕು.

ಮಹಿಳೆಯರು ಗಮನಿಸಬೇಕಾದದ್ದು

  • ತುಂಬಾ ಟೈಟ್ footwear ಬೇಡ
  • ಹೈ ಹೀಲ್ಸ್ ಕಡಿಮೆ ಬಳಸಿ
  • Pedicure ಮಾಡುವಾಗ ಜಾಗ್ರತೆ
  • ಸ್ವಚ್ಛತೆ ಇಲ್ಲದ parlourಗಳಿಂದ ಸೋಂಕು ಬರಬಹುದು.

ಮಧುಮೇಹಿಗಳ Foot Exercise

ಸರಳ ವ್ಯಾಯಾಮ:

  • ಕಾಲು ತಿರುಗಿಸುವುದು
  • ಬೆರಳು ಮಡಚುವುದು
  • ನಿಧಾನವಾಗಿ ನಡೆದು ಬರೋದು

ಇವು ರಕ್ತಪ್ರಸರಣ ಸುಧಾರಿಸುತ್ತದೆ.

ಆಹಾರ ಮತ್ತು ಕಾಲಿನ ಆರೋಗ್ಯದ ಸಂಬಂಧ

ಒಳ್ಳೆಯ ಆಹಾರ ಕೂಡ ಮುಖ್ಯ.

ತಿನ್ನಬೇಕಾದವು:

  • ಹಸಿರು ತರಕಾರಿ
  • ಪ್ರೋಟೀನ್
  • ಕಡಿಮೆ ಸಕ್ಕರೆ ಆಹಾರ
  • Whole grains

ತಪ್ಪಿಸಬೇಕಾದವು:

  • ಜಂಕ್ ಫುಡ್
  • ಸಿಹಿ
  • Soft drinks
  • Deep fried items

 ಧೂಮಪಾನ ಮತ್ತು ಮದ್ಯಪಾನ ಯಾಕೆ ಅಪಾಯ?

Smoking ಮಾಡಿದರೆ:

  • ರಕ್ತನಾಳ ಕುಗ್ಗುತ್ತದೆ
  • ಕಾಲಿಗೆ ರಕ್ತ ಕಡಿಮೆ ಹೋಗುತ್ತದೆ

Alcohol:

  • ನರ ಹಾನಿ ಹೆಚ್ಚಿಸುತ್ತದೆ
  • ಹೀಗಾಗಿ ಎರಡನ್ನೂ ತಪ್ಪಿಸುವುದು ಉತ್ತಮ.

ಯಾರಿಗೆ ಹೆಚ್ಚು ಅಪಾಯ?

ಈವರಲ್ಲಿ ಹೆಚ್ಚು ಕಾಣಬಹುದು:
  • ಹಲವು ವರ್ಷಗಳಿಂದ ಮಧುಮೇಹ ಇರುವವರು
  • Blood Sugar ನಿಯಂತ್ರಣದಲ್ಲಿ ಇಲ್ಲದವರು
  • Smoking ಮಾಡುವವರು
  • BP ಮತ್ತು cholesterol ಜಾಸ್ತಿ ಇರುವವರು
  • ವ್ಯಾಯಾಮ ಮಾಡದವರು

WHO ಮತ್ತು ಆರೋಗ್ಯ ತಜ್ಞರು ಹೇಳೋದೇನು?

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಂತರಾಷ್ಟ್ರೀಯ ಮಧುಮೇಹ ಮಾರ್ಗಸೂಚಿಗಳ ಪ್ರಕಾರ:

  • ಮಧುಮೇಹಿಗಳ ಕಾಲು ವರ್ಷಕ್ಕೆ ಕನಿಷ್ಠ ಒಮ್ಮೆ ಪರೀಕ್ಷಿಸಬೇಕು
  • High-risk patients ಹೆಚ್ಚು ಬಾರಿ checkup ಮಾಡಿಸಬೇಕು
  • ಗಾಯ ಕಂಡ ಕೂಡಲೇ ಚಿಕಿತ್ಸೆ ಶುರು ಮಾಡಬೇಕು
  • ಶಿಕ್ಷಣ ಮತ್ತು self-care ತುಂಬಾ ಮುಖ್ಯ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 

ಕುಟುಂಬದವರ ಪಾತ್ರವೂ ಮುಖ್ಯ

ಮಧುಮೇಹ ಇರುವವರು ಕೆಲವೊಮ್ಮೆ ಸಮಸ್ಯೆ ಗಮನಿಸದೇ ಇರಬಹುದು.

ಹೀಗಾಗಿ ಮನೆಯವರು:

  • ಕಾಲು ನೋಡಿಕೊಡುವುದು
  • ಔಷಧಿ ಸಮಯಕ್ಕೆ ಕೊಡಿಸುವುದು
  • ಗಾಯ ಕಂಡರೆ ವೈದ್ಯರಿಗೆ ಕರೆದೊಯ್ಯುವುದು ಇವು ಮಾಡಬೇಕು.


“ಸಣ್ಣ ಗಾಯ” ಅಂತ ನಿರ್ಲಕ್ಷ್ಯ ಮಾಡಬೇಡಿ


ಹೆಚ್ಚಿನ amputations ಸಣ್ಣ ಗಾಯದಿಂದಲೇ ಶುರುವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಸರಿಯಾದ ಕಾಲಿನ ಆರೈಕೆಯಿಂದ ಇದನ್ನು ತಪ್ಪಿಸಬಹುದು. 

Healthy lifestyle for diabetic patients
ಆರೋಗ್ಯಕರ ಜೀವನಶೈಲಿ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ

ಮಧುಮೇಹಿಗಳ ಕಾಲಿನ ಆರೈಕೆ ಕುರಿತು ಸಾಮಾನ್ಯ ಪ್ರಶ್ನೆಗಳು

1. ಮಧುಮೇಹದಿಂದ ಕಾಲಿಗೆ ಯಾಕೆ ಸಮಸ್ಯೆ ಬರುತ್ತದೆ?

ಮಧುಮೇಹದಿಂದ ನರ ಹಾನಿ ಮತ್ತು ರಕ್ತಪ್ರಸರಣ ಸಮಸ್ಯೆ ಉಂಟಾಗಬಹುದು. ಇದರಿಂದ ಕಾಲಿನಲ್ಲಿ ಸಂವೇದನೆ ಕಡಿಮೆಯಾಗುವುದು, ಗಾಯ ಗುಣವಾಗದಿರುವುದು ಮತ್ತು ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

2. Diabetic Foot ಅಂದ್ರೇನು?

ಮಧುಮೇಹದಿಂದ ಕಾಲಿನಲ್ಲಿ ಉಂಟಾಗುವ ಸಮಸ್ಯೆಗಳು — ಗಾಯ, ಹುಣ್ಣು, ಸೋಂಕು, numbness, heel crack ಇತ್ಯಾದಿಗಳನ್ನು ಒಟ್ಟಾಗಿ Diabetic Foot ಎಂದು ಕರೆಯುತ್ತಾರೆ.

3. ಮಧುಮೇಹಿಗಳಲ್ಲಿ ಕಾಲು ಜಿಡ್ಡಾಗುವುದು ಸಾಮಾನ್ಯವೇ?

ಹೌದು. ಇದು ನರ ಹಾನಿಯ (Neuropathy) ಆರಂಭಿಕ ಲಕ್ಷಣವಾಗಿರಬಹುದು. ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

4. ಮಧುಮೇಹಿಗಳ ಕಾಲಿನ ಗಾಯ ಯಾಕೆ ಬೇಗ ಗುಣವಾಗುವುದಿಲ್ಲ?

ರಕ್ತಪ್ರಸರಣ ಕಡಿಮೆಯಾಗುವುದು ಮತ್ತು Blood Sugar ಜಾಸ್ತಿ ಇರುವುದು ಪ್ರಮುಖ ಕಾರಣಗಳು. ಇದರಿಂದ ಗಾಯ ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ.

5. ಮಧುಮೇಹ ಇರುವವರು ಬರಿಗಾಲಿನಲ್ಲಿ ನಡೆಯಬಹುದೇ?

ಬೇಡ. ಸಣ್ಣ ಗಾಯವೂ ದೊಡ್ಡ ಸಮಸ್ಯೆಯಾಗಬಹುದು. ಮನೆಯಲ್ಲಿ ಕೂಡ footwear ಅಥವಾ soft slippers ಬಳಸುವುದು ಉತ್ತಮ.

6. ಕಾಲಿನ ಆರೈಕೆಗೆ ಯಾವ ರೀತಿಯ ಚಪ್ಪಲಿ ಉತ್ತಮ?

ಮೃದುವಾದ, ಸರಿಯಾಗಿ fit ಆಗುವ footwear ಉತ್ತಮ. ತುಂಬಾ ಟೈಟ್ ಅಥವಾ ಗಟ್ಟಿ ಚಪ್ಪಲಿ ತಪ್ಪಿಸಬೇಕು.

7. ಮಧುಮೇಹಿಗಳ ಕಾಲು ಪ್ರತಿದಿನ ಪರಿಶೀಲನೆ ಮಾಡಬೇಕೇ?

ಹೌದು. ಪ್ರತಿದಿನ ಕಾಲಿನಲ್ಲಿ ಗಾಯ, ಬಿರುಕು, ಕೆಂಪಾಗಿರುವುದು ಅಥವಾ ಊತ ಇದೆಯೇ ಎಂದು ಪರಿಶೀಲಿಸಬೇಕು.

ಕೊನೆಯ ಮಾತು


ಮಧುಮೇಹ ಇದ್ದರೆ ಕೇವಲ Blood Sugar ನೋಡಿಕೊಳ್ಳೋದು ಸಾಕಾಗಲ್ಲ. ಕಾಲಿನ ಆರೈಕೆಯೂ ಅಷ್ಟೇ ಮುಖ್ಯ.

ಪ್ರತಿದಿನ 5 ನಿಮಿಷ ಕಾಲು ನೋಡಿಕೊಳ್ಳುವ ಅಭ್ಯಾಸ:

ದೊಡ್ಡ ಗಾಯ ತಪ್ಪಿಸಬಹುದು, ಸೋಂಕು ತಪ್ಪಿಸಬಹುದು, ಕಾಲು ಕತ್ತರಿಸುವ ಪರಿಸ್ಥಿತಿ ತಪ್ಪಿಸಬಹುದು

“ಇವತ್ತು ಸಣ್ಣ ಸಮಸ್ಯೆ” ಅಂತ ಬಿಡಬೇಡಿ. ಸಮಯಕ್ಕೆ ಜಾಗ್ರತೆ ತೆಗೆದುಕೊಂಡರೆ ಆರೋಗ್ಯಕರ ಜೀವನ ನಡೆಸಬಹುದು.


References

  1. World Health Organization Diabetes Resources
  2. International Diabetes Federation – Diabetic Foot Guidelines
  3. NICE Diabetic Foot Problems Guideline
ಇಂತಹ ಸರಳ ಮತ್ತು ಉಪಯುಕ್ತ ಆರೋಗ್ಯ ಮಾಹಿತಿಗಾಗಿ ನಮ್ಮ ಜೊತೆ ಇರಿ 

Namma Arogya Jeevana 🌿



ನಿಮಗೆ ಈ ಲೇಖನ ಇಷ್ಟವಾದರೆ, ದಯವಿಟ್ಟು share ಮಾಡಿ 

ನಮ್ಮ ಬ್ಲಾಗ್‌ನಲ್ಲಿ ಇನ್ನಷ್ಟು ಆರೋಗ್ಯ ಮಾಹಿತಿ ಈಗಲೇ ಓದಿ!



ಮಧುಮೇಹ ರೋಗಿಗಳು ತಿನ್ನಬೇಕಾದ ತರಕಾರಿಗಳು

Diabetes Control Tips in Kannada

ಒತ್ತಡದಿಂದ ರಕ್ತದಲ್ಲಿನ ಸಕ್ಕರೆ ಏಕೆ ಹೆಚ್ಚಾಗುತ್ತದೆ?


📌

ನಿರಾಕರಣೆ (Disclaimer)

ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಆರೋಗ್ಯ ಶಿಕ್ಷಣ (Health Education) ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಇದು ವೈದ್ಯಕೀಯ ಸಲಹೆ, ನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ.

ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ, ದಯವಿಟ್ಟು ಅರ್ಹ ವೈದ್ಯರನ್ನು ಸಂಪರ್ಕಿಸಿ. ಸ್ವಯಂ ಚಿಕಿತ್ಸೆ ಅಪಾಯಕಾರಿಯಾಗಿದೆ.

ಈ ಮಾಹಿತಿಯನ್ನು ವಿಶ್ವಾಸಾರ್ಹ ಆರೋಗ್ಯ ಸಂಸ್ಥೆಗಳ ಮಾರ್ಗಸೂಚಿಗಳ ಆಧಾರಿತವಾಗಿ ನೀಡಲಾಗಿದೆ.


✍️

ಲೇಖಕರ ಮಾಹಿತಿ (Author)

Namma Arogya Jeevana Team

ನಾವು ಆರೋಗ್ಯ ಜಾಗೃತಿ ಮತ್ತು ನಿಖರ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವ ತಂಡ.

ನಮ್ಮ ವಿಷಯವು ವಿಶ್ವಾಸಾರ್ಹ ಮೂಲಗಳು ಮತ್ತು ವೈದ್ಯಕೀಯ ಮಾರ್ಗಸೂಚಿಗಳ ಆಧಾರಿತವಾಗಿದೆ.


✔ ನಿಖರ ಮಾಹಿತಿ
✔ ಸರಳ ಕನ್ನಡ
✔ ಆರೋಗ್ಯ ಜಾಗೃತಿ

Comments

Popular posts from this blog

Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?

Hair Fall Control Kannada: ಒದ್ದೆಯಾದ ಕೂದಲಿನಲ್ಲಿ ಮಾಡುವ 5 ತಪ್ಪುಗಳು & ಸರಿಯಾದ ಪರಿಹಾರಗಳು

ಹೈ BP ಲಕ್ಷಣಗಳು ಯಾವುವು? ಹೈಪರ್‌ಟೆನ್ಷನ್ ಸಂಪೂರ್ಣ ಮಾಹಿತಿ ಕನ್ನಡದಲ್ಲಿ