Walking vs Exercise – ಯಾವುದು ಶುಗರ್ ನಿಯಂತ್ರಣಕ್ಕೆ ಉತ್ತಮ?
ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ಮಹತ್ವದ ಭಾಗ ಅಂದರೆ ಗರ್ಭಿಣಿ ಆಗುವುದು. . ಈ ಸಮಯದಲ್ಲಿ ತಾಯಿ ಸೇವಿಸುವ ಆಹಾರವು ಮಗುವಿನ ಬೆಳವಣಿಗೆ, ಮೆದುಳಿನ ಅಭಿವೃದ್ಧಿ ಮತ್ತು ಆರೋಗ್ಯಕ್ಕೆ ತುಂಬಾ ಮುಖ್ಯ.
ಸರಿಯಾದ ಪೌಷ್ಟಿಕ ಆಹಾರ ಸೇವಿಸಿದರೆ ತಾಯಿ ಆರೋಗ್ಯವಾಗಿರುತ್ತಾರೆ ಮತ್ತು ಮಗುವಿನ ಬೆಳವಣಿಗೆಯೂ ಉತ್ತಮವಾಗಿರುತ್ತದೆ.
ಈ ಲೇಖನದಲ್ಲಿ ಗರ್ಭಿಣಿಯರು ತಿನ್ನಬೇಕಾದ ಪ್ರಮುಖ ಪೌಷ್ಟಿಕ ಆಹಾರಗಳ ಬಗ್ಗೆ ತಿಳಿಯೋಣ.
ಹಾಲು, ಮೊಸರು, ಪನೀರ್,ಬೆಣ್ಣೆ, ತುಪ್ಪ,ಮುಂತಾದವು ಗರ್ಭಿಣಿಯರಿಗೆ ತುಂಬಾ ಉಪಯುಕ್ತ.
- ಅಗತ್ಯ ಕ್ಯಾಲ್ಸಿಯಂ ಸಿಗುತ್ತೆದೆ.
-ಮಗುವಿನ ಎಲುಬುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ
-ದೇಹಕ್ಕೆ ಶಕ್ತಿ ನೀಡುತ್ತದೆ.
ಮೊಟ್ಟೆ ಉತ್ತಮ ಗುಣಮಟ್ಟದ ಪ್ರೋಟೀನ್ ಹೊಂದಿದೆ. ಒಂದು ಮೊಟ್ಟೆ ತುಂಬುತ್ತದೆ ಹೊಟ್ಟೆ ಅಂತಾ ಹೇಳ್ತಾರೆ ಅಲ್ವಾ ದಿನನಿತ್ಯ ಮೊಟ್ಟೆ ತಿನ್ನುವುದು ತುಂಬ ಒಳ್ಳೆದು.
-ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ
-ತಾಯಿಗೆ ಶಕ್ತಿ ನೀಡುತ್ತದೆ
-ಪೋಷಕಾಂಶಗಳಿಂದ ಸಮೃದ್ಧ
ಪಾಲಕ್ ಸೊಪ್ಪು, ಮೆಂತೆ ಸೊಪ್ಪು, ಮೂರಿಂಗಾ ಸೊಪ್ಪು ಸ್ಥಳೀಯವಾಗಿ ಸಿಗುವ ಹಸಿರು ಸೊಪ್ಪುಗಳ ಸೊಪ್ಪುಗಳನ್ನು ತಿನ್ನುವುದು ಬಹಳ ಪೌಷ್ಟಿಕ.
-ಐರನ್ ಮತ್ತು ಫೋಲಿಕ್ ಆಮ್ಲ
-ರಕ್ತಹೀನತೆ ತಡೆಯಲು ಸಹಾಯ
-ಮಗುವಿನ ಆರೋಗ್ಯಕರ ಬೆಳವಣಿಗೆ
ಹಣ್ಣುಗಳು ಗರ್ಭಿಣಿಯರಿಗೆ ಅತ್ಯಂತ ಮುಖ್ಯವಾದ ಆಹಾರ.
-ಸೇಬು
-ಬಾಳೆಹಣ್ಣು
-ಕಿತ್ತಳೆ
-ದಾಳಿಂಬೆ
-ವಿಟಮಿನ್ ಮತ್ತು ಫೈಬರ್
-ಜೀರ್ಣಕ್ರಿಯೆಗೆ ಸಹಾಯ
-ದೇಹಕ್ಕೆ ಶಕ್ತಿ
5️⃣ ಒಣ ಹಣ್ಣುಗಳು, ಬೀಜಗಳು
ಬಾದಾಮಿ, ವಾಲ್ನಟ್, ಕಡಲೆಕಾಯಿ,ಗೋಡಂಬಿ, ಅಂಜುರಾ ಮುಂತಾದವು ತುಂಬಾ ಪೌಷ್ಟಿಕ.
-ಆರೋಗ್ಯಕರ ಕೊಬ್ಬು
-ಮೆದುಳಿನ ಬೆಳವಣಿಗೆಗೆ ಸಹಾಯ
-ಶಕ್ತಿಯನ್ನು ಹೆಚ್ಚಿಸುತ್ತದೆ
ತೊಗರಿ ಬೇಳೆ, ಕಡಲೆ ಬೇಳೆ, ಹುರಳಿ, ರಾಜ್ಮಾ ಮುಂತಾದವು ಉತ್ತಮ ಪ್ರೋಟೀನ್ ಮೂಲ.
-ಪ್ರೋಟೀನ್ ಸಮೃದ್ಧ
-ಜೀರ್ಣಕ್ರಿಯೆಗೆ ಸಹಾಯ
-ದೇಹಕ್ಕೆ ಶಕ್ತಿ
ತರಕಾರಿಗಳು ಗರ್ಭಿಣಿಯರಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತವೆ.ತರಕಾರಿ ಇಷ್ಟ ಇಲ್ಲದವರು ವೆರೈಟಿ ರೆಸಿಪಿ ಮಾಡ್ಕೊಂಡು ತಿನ್ನಿ ಮುಖ್ಯ .
-ಕ್ಯಾರೆಟ್
-ಬೀಟ್‌ರೂಟ್
-ಸಿಹಿ ಆಲೂಗಡ್ಡೆ
-ಲಾಭಗಳು:
-ವಿಟಮಿನ್ A ಮತ್ತು C
-ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ರಾಗಿ, ಓಟ್ಸ್, ಬ್ರೌನ್ ರೈಸ್ ಮುಂತಾದವು ಆರೋಗ್ಯಕರ.
-ಶಕ್ತಿ ನೀಡುತ್ತದೆ
-ಫೈಬರ್ ಹೆಚ್ಚು
-ಜೀರ್ಣಕ್ರಿಯೆ ಸುಧಾರಿಸುತ್ತದೆ
ಕೆಲವು ಮೀನುಗಳು ಒಮೆಗಾ-3 ಹೊಂದಿವೆ.
-ಮಗುವಿನ ಮೆದುಳಿನ ಬೆಳವಣಿಗೆ
-ದೇಹಕ್ಕೆ ಪ್ರೋಟೀನ್
ನೀರನ್ನು ಸಾಕಷ್ಟು ಕುಡಿಯುವುದು ತುಂಬಾ ಮುಖ್ಯ.
-ದೇಹ ಹೈಡ್ರೇಟ್ ಆಗಿರುತ್ತದೆ
-ದಣಿವು ಕಡಿಮೆ
-ಜೀರ್ಣಕ್ರಿಯೆ ಉತ್ತಮ
✔ ದಿನಕ್ಕೆ 4–5 ಬಾರಿ ಸ್ವಲ್ಪಸ್ವಲ್ಪವಾಗಿ ಆಹಾರ ಸೇವಿಸಿ.
✔ ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ.
✔ ಜಂಕ್ ಫುಡ್ ಕಡಿಮೆ ಮಾಡಿ.
✔ ವೈದ್ಯರ ಸಲಹೆ ಪ್ರಕಾರ Folic acid,iron, calcium ಟ್ಯಾಬ್ಲೆಟ್ ತೆಗೆದುಕೊಳ್ಳಿ.
✔ ಸಾಕಷ್ಟು ವಿಶ್ರಾಂತಿ ಪಡೆಯಿರಿ.
ಸರಿಯಾದ ಪೌಷ್ಟಿಕ ಆಹಾರ ಸೇವಿಸುವುದರಿಂದ ಗರ್ಭಿಣಿಯರ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಮಗುವಿನ ಬೆಳವಣಿಗೆಯೂ ಸುಗಮವಾಗಿರುತ್ತದೆ.
ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವಿಸುವುದು ಅತ್ಯಂತ ಮುಖ್ಯವಾಗಿದೆ. ಹಣ್ಣುಗಳು, ತರಕಾರಿಗಳು, ಕಾಯಿ-ಬೀಜಗಳು, ಹಾಲು ಉತ್ಪನ್ನಗಳು ಮತ್ತು ಸಾಕಷ್ಟು ನೀರನ್ನು ದಿನವೂ ಸೇವಿಸಿದರೆ ದೇಹಕ್ಕೆ ಅಗತ್ಯವಾದ ವಿಟಮಿನ್‌ಗಳು ಮತ್ತು ಖನಿಜಗಳು ದೊರೆಯುತ್ತವೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುವುದರ ಜೊತೆಗೆ ತಾಯಿಯ ಆರೋಗ್ಯವನ್ನೂ ಉತ್ತಮವಾಗಿರಿಸುತ್ತದೆ. ಆದ್ದರಿಂದ ಗರ್ಭಿಣಿಯರು ಸದಾ ಸಮತೋಲನವಾದ ಮತ್ತು ಪೌಷ್ಟಿಕ ಆಹಾರವನ್ನು ಆಯ್ಕೆ ಮಾಡಿ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅತ್ಯಂತ ಅಗತ್ಯ. 🌿👶🥗
Comments
Post a Comment